Have worked in energy management sector for forty years. After retirement, I am spending time writing articles and poems on energy, economy and life issues based on my seventy and odd years of life.

Tuesday, September 23, 2025

Google

ಬೆಂಗಳೂರು ಅಂದು ಇಂದು

ಬೆಂಗಳೂರು ದೊಡ್ಡ ನಗರವಾಗಿದೆ
ಭಾರತ ದೇಶದ ಹೆಮ್ಮೆಯಾಗಿದೆ.

ಹಿಂದೆಯೂ ನಮ್ಮ ಊರು ಆಕರ್ಷಿಸಿತ್ತು 
ಇಲ್ಲಿಯ ಹವಾಮಾನ ಎಲ್ಲರಿಗೂ ಮೆಚ್ಚಿಸಿತ್ತು.

ಬ್ರಿಟಿಷರು ಕೂಡ ಇಲ್ಲಿ ನೆಲಸಿದ್ದರು
ಇದೊಂದು ಗಿರಿಧಾಮವೆಂದು ನೆನಸಿದ್ದರು.

ಆಗಿನ ಚೆನ್ನೈ ಬಂದರು ಬಳಸಬೇಕಾಯಿತು
ರೈಲು ಜಾಲವನ್ನೂ ಹಾಕಲಾಯಿತು.

ಬಹಳಷ್ಟು ಸಾರ್ವಜನಿಕ ವಲಯದ ಘಟಕಗಳು ಬಂದವು
ಆಕಾಶ ಶೋಧನ ಸಂಸ್ಥೆಗಳೂ ಸ್ಥಾಪನೆ ಆದವು.

ವಿಜ್ಞಾನ ಸಂಸ್ಥೆ ಮತ್ತಿತರ ವಿದ್ಯಾಲಯಗಳು ಬಂದವು
ತಾಂತ್ರಿಕ ಪದವೀಧರಾಗಲು ಅವಕಾಶವಾದವು.

ತಂತ್ರಜ್ಞಾನ ಬಳಕೈಯಿಂದ ಹೆಸರಾಂತವಾಯಿತು
ಅಂತರರಾಷ್ಟ್ರೀಯ ಸಂಸ್ಥೆಗಳೂ ಆರಂಭವಾದವು.

ಊರು ಬಹಳಷ್ಟು ಬೆಳೆಯಲಾಯಿತು
ನಗರದಿಂದ ಮೆಟ್ರೋವಾಗಿ ಬದಲಾಯಿತು.

ಹತ್ತಕ್ಕೂ ಮೀರಿ ರೈಲು ನಿಲ್ದಾಣಗಳು ಹೊಂದಿವೆ
ಭಾರತದ ಮೆಚ್ಚಿನ ವಿಮಾನ ನಿಲ್ದಾಣವಾಗಿದೆ.

ಇನ್ನೂ ಕೆಲವು ರೈಲು ನಿಲ್ದಾಣಗಳನ್ನು ವಿಸ್ತರಿಸಲಿರುವರು
ಮತ್ತೆರಡು ವಿಮಾನ ನಿಲ್ದಾಣಗಳು ಬರಲಿರುವವು.

ಮಾಹಿತಿ ತಂತ್ರಜ್ಞಾನದಲ್ಲಿ ಎತ್ತಿದ ಕೈ ಎಂಬ ಊರು
ಉಪಗ್ರಹ ಸಂಚಾಲನೆಯ ವ್ಯವಸ್ಥೆಯೂ ಹೊಂದಿಹದು.

ಈ ನಗರದಲ್ಲಿ ಇತ್ತೀಚಿಗೆ ಬಹುತೇಕ ಸಮಸ್ಯೆಗಳು ಉಂಟಾಗಿವೆ
ಇಷ್ಟು ತಂತ್ರ ಜ್ಞಾನವುಳ್ಳ ಆಡಳಿತದಲ್ಲಿ ಇದಕ್ಕೆ ಪರಿಹಾರವಿಲ್ಲವೇ?

ಜನಸಂಖ್ಯೆ ಬಹುತೇಕ ಮಟ್ಟಿಗೆ ಹೆಚ್ಚಾಗಿದೆ
ವಾಹನಗಳ ದಟ್ಟಣೆಯೂ ಹೆಚ್ಚುತ್ತಿದೆ.

ಮೆಟ್ರೋ ರೈಲು ಎಲ್ಲಾ ದಿಕ್ಕಲ್ಲೂ ವ್ಯಾಪಕವಾಗಿ ಹರಡಿಲ್ಲ
ಜನರು ವಾಹನಗಳನ್ನು ಉಪಯೋಗಿಸುವುದು ಬಿಟ್ಟಿಲ್ಲ.

ವಾಹನ ಚಲನೆ ಸಮೃದ್ಧ ಮಳೆ ಇವುಗಳಿಂದ ರಸ್ತೆಗಳು ಹಾಳಾಗಿವೆ 
ಸಂಚಾರ ಸ್ತಂಭನವೂ ಹೆಚ್ಚು ಗೊಂಡಿದೆ.

ರಸ್ತೆಗಳಲ್ಲಿ ಗುಂಡಿಗಳು ಹೆಚ್ಚುತ್ತಲೇ ಇವೆ
ಒಂದನ್ನು ಮುಚ್ಚಿದರೆ ಮತ್ತೆರಡು ಬರಲಿವೆ.

ದಿನಕ್ಕೊಂದು ರಸ್ತೆ ಅಪಘಾತಗಳು 
ಹೆಚ್ಚಾಗಿ ಜನರ ಮರಣ ಸಂಭವಗಳು.

ಇದಕ್ಕೇನು ಬೇಗನೆಯ ಪರಿಹಾರ ವಿಲ್ಲವೇ?
ಇದಕ್ಕೆ ಅಧಿಕಾರಿಗಳು ಪ್ರಾಮುಖ್ಯತೆ ಕೊಡಬೇಡವೆ?

ಬೆಂಗಳೂರು ಅಂತರಾಷ್ಟ್ರೀಯ ಮಟ್ಟದ ಹೆಸರು ಗಳಿಸಿರುವುದು
ಆದರೆ ಬೇಸರವಾಗಿ ಈಗ ಬೆಂದಜನರ ಊರಾಗಿರುವುದು.

- ಗೋಪಿನಾಥ್ S

(ChatGPT ಬೆಂಬಲವಿಲ್ಲದೆ ಬರೆಯಲ್ಪಟ್ಟಿದೆ)


0 Comments:

Post a Comment

<< Home